ಸ್ಥಳ ನಂಬುಗೆ

ಘಂಟೆ ನಾದ, ಪಠಿತ ವೇದ
ಪಂಚೆ ಶಲ್ಯ ಪೋಷಿತ..

ಆತ್ಮ ಶೋಧ, ಭಕ್ತಿ ಪಾದ
ಶರಣು ಎಂಬ ವಂದಿತ..

ಪುಷ್ಪ ಗಂಧ, ಪಂಚಲೋಹಂದ
ಅಭಿಷೇಕ ನೈವೇದ್ಯಿ ಪೂಜಿತ..

ಇಂತಿ ಜಗದ ಎಲ್ಲೆ, ಎಲ್ಲ ಒಂದೇ,
ಅಲ್ಲದೇ.. ತಿಳಿ ನೀನು..
ತರ್ಕ ಬೇರೆ, ನೆಲೆಸಿಹ ಶಕ್ತಿ ಮೇರೆ,
ನಂಬಿ ಮುಗಿದು ಪಡೆ ಧನ್ಯಾತ್ಮವಾ..

:ಆಕೃಶ

Advertisements

ಸುಶಿಕ್ಷಿತ

ತಪ್ಪು ತಿದ್ದಿ ಕಲಿಯಲು
ಸೋತು ಅರಿವು ಮೂಡಲು
ಕಷ್ಟವನ್ನು ಎದುರಿಸುವಾತ
ಸಹನೆಯಿಂದ ಈಸುವಾತ
ಅನುಭವದಿ ಕಲಿತಾ, ಸುಶಿಕ್ಷಿತ !
ಅನುಭವವೇ ಶಿಕ್ಷಕ.. ಜೀವನದ ರಕ್ಷಕ..

:ಆಕೃಶ

ಭಾವ ಹಲವು

ಮೊದಲಿಗೆ ನೀ ಬರಲು ಬಹು ಖುಷಿ
ಮರಳಿ ಬರುವಾಗ ಏನೋ ಕಸಿವಿಸಿ
ಬಿಡದೆ ನೀನಿರಲು ದಣಿಯಿತು ಮನದಿ ಶಪಿಸಿ
ಯೋಚಿಸಿ ಬೆರಗಾದೆ ಭಾವನೆಗಳ ಪಲ್ಲಟಕ್ಕೆ..

ಓ ಮೇಘವೇ.. ಮಳೆ ನೀ ಸುರಿಸಿ !!

:ಆಕೃಶ

ತುಣುಕುಗಳು..

ಕೆಲವು ವರುಷಗಳಿಂದ ಅನಿಸುತ್ತಿತ್ತು.
ಪ್ರಯಾಣದ ಹಾದಿಯಲ್ಲಿ ಸಿಗುವ ಶಾಂತ ಪರಿಸರ ಉತ್ತೇಜಿಸುತ್ತಿತ್ತು.
ಮಳೆ ನಿಂತು ತಂಗಾಳಿ ಬೀಸುತ್ತಿತ್ತು.
ಹಚ್ಚ ಹಸಿರ ಸುತ್ತ ಸುಳಿಯವ ವೇಳೆ ಮನಸ್ಸನ್ನು ಮರೆಸುತ್ತಿತ್ತು.
ಅಕ್ಷರಗಳು ಮನಸ್ಸಲ್ಲಿ ಪುಟಿದೇಳುತ್ತಿತ್ತು.
ಅಂತೆಯೇ ಹೊರ ಬಂದ ತುಂಡುಗಳು.. ತುಣುಕುಗಳು..

:ಆಕೃಶ